Chintamani Town
ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್
ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್- ರಾಜ್ಯದ ಆರೋಗ್ಯ ಸೇವೆಯನ್ನು ಬಲಪಡಿಸುವ ದೃಷ್ಟಿಯಿಂದ ಗೃಹ ಆರೋಗ್ಯ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಬಲಪಡಿಸಿ ಹೊಸದಾಗಿ 262 ಆಂಬ್ಯುಲೆನ್ಸ್ ಗಳನ್ನು ಒದಗಿಸಿದೆ. ಚಿಂತಾಮಣಿ ತಾಲ್ಲೂಕಿನಾದ್ಯಂತ ತುರ್ತು ಸೇವೆಗೆ ನೆರವಾಗಲೆಂದು ಕುರುಬೂರು ಮತ್ತು ಕೈವಾರ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಂಬ್ಯುಲೆನ್ಸ್ ನೀಡಲಿದ್ದು ಆ ಭಾಗದಲ್ಲಿ ಕಾರ್ಯನಿರ್ವಹಿಸಲಿವೆ.
ಟೆಸ್ಟ್ ಡ್ರೈವ್ ಟ್ರಾಕ್ ನಿರ್ಮಾಣಕ್ಕೆ ಜಾಗ ಮಂಜೂರು
ಟೆಸ್ಟ್ ಡ್ರೈವ್ ಟ್ರಾಕ್ ನಿರ್ಮಾಣಕ್ಕೆ ಜಾಗ ಮಂಜೂರು ಸಾರಿಗೆ ಇಲಾಖೆಯಿಂದ ಚಾಲನಾ ಪರವಾನಗಿ ತ್ವರಿತ ಪ್ರಕ್ರಿಯೆಗೆ 3 ಎಕರೆ 20ಗುಂಟೆ ವಿಸ್ತೀರ್ಣದಲ್ಲಿ ಸಾರಿಗೆ ಇಲಾಖೆ ಮುಂಭಾಗ ಟೆಸ್ಟ್ ಡ್ರೈವ್ ಟ್ರಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಚಿಂತಾಮಣಿಯ ಕಾಗತಿ ಗ್ರಾಮದಲ್ಲಿ ನಡೆದ ಕೃಷಿ ಪರಿಕರಗಳ ವಿತರಣೆ
ಚಿಂತಾಮಣಿಯ ಕಾಗತಿ ಗ್ರಾಮದಲ್ಲಿ ನಡೆದ ಕೃಷಿ ಪರಿಕರಗಳ ವಿತರಣೆ, ಬೆಲೆ ವಿಮೆ, ಸಮೀಕ್ಷೆ ಮತ್ತು ಪರ್ಯಾಯ ಬೆಳೆ ಪದ್ಧತಿಗಳ ಕುರಿತ ಸಂವಾದದಲ್ಲಿ ರೈತರು, ವಿಜ್ಞಾನಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಭಾಗಕ್ಕೆ ಬೇಟಿ
ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಭಾಗಕ್ಕೆ ಬೇಟಿ ನೀಡಿ ಜನತೆಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿನ ಸ್ವಚ್ಛತೆ ಹಾಗೂ ಒಳಚರಂಡಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಯಿತು.
ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ
ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ದಿನಾಂಕ 14/07/2023 ರಿಂದ 05/08/2023 ರವರಿಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ಸೈಟ್ http://SCHOOLEDUCATION.KAR.NIC.IN ಸಂಪರ್ಕಿಸಲು ತಿಳಿಸಿದೆ.