ಚಿಂತಾಮಣಿಯ ಕಾಗತಿ ಗ್ರಾಮದಲ್ಲಿ ನಡೆದ ಕೃಷಿ ಪರಿಕರಗಳ ವಿತರಣೆ

ಚಿಂತಾಮಣಿಯ ಕಾಗತಿ ಗ್ರಾಮದಲ್ಲಿ ನಡೆದ ಕೃಷಿ ಪರಿಕರಗಳ ವಿತರಣೆ, ಬೆಲೆ ವಿಮೆ, ಸಮೀಕ್ಷೆ ಮತ್ತು ಪರ್ಯಾಯ ಬೆಳೆ ಪದ್ಧತಿಗಳ ಕುರಿತ ಸಂವಾದದಲ್ಲಿ ರೈತರು, ವಿಜ್ಞಾನಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

Read More

ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಭಾಗಕ್ಕೆ ಬೇಟಿ

ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಭಾಗಕ್ಕೆ ಬೇಟಿ ನೀಡಿ ಜನತೆಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿನ ಸ್ವಚ್ಛತೆ ಹಾಗೂ ಒಳಚರಂಡಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಯಿತು.

Read More

ಜಿಲ್ಲೆಗೊಂದು ವಿಶ್ವವಿದ್ಯಾಲಯ ತೆರೆಯುವ ಅವೈಜ್ಞಾನಿಕ ನಿರ್ಧಾರದಿಂದ ವಿವಿಗಳು ಆರ್ಥಿಕ ಮುಗ್ಗಟ್ಟು

ಹಿಂದಿನ ಸರ್ಕಾರ ರಾಜಕೀಯ ಒತ್ತಡದಿಂದ ಜಿಲ್ಲೆಗೊಂದು ವಿಶ್ವವಿದ್ಯಾಲಯ ತೆರೆಯುವ ಅವೈಜ್ಞಾನಿಕ ನಿರ್ಧಾರದಿಂದ ವಿವಿಗಳು ಆರ್ಥಿಕ ಮುಗ್ಗಟ್ಟು ಎದುರಿಸುವ ಜೊತೆಗೆ ಮುಚ್ಚುವ ಹಂತಕ್ಕೆ ತಲುಪಿದೆ ಹಿಂದಿನ ಕರಾಳತೆ ವಿವರಿಸಿದೆ ಮುಖ್ಯಮಂತ್ರಿಗಳ ಸೂಚನೆಯಂತೆ ಎಲ್ಲಾ ವಿವಿಗಳ ಕುಲಪತಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

Read More

ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ

ಕರ್ನಾಟಕ ಅರ್ಹತಾ ಪರೀಕ್ಷೆ -2023 (KARTET-2023) ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ದಿನಾಂಕ 14/07/2023 ರಿಂದ 05/08/2023 ರವರಿಗೆ ಅವಕಾಶ ಕಲ್ಪಿಸಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ಸೈಟ್ http://SCHOOLEDUCATION.KAR.NIC.IN ಸಂಪರ್ಕಿಸಲು ತಿಳಿಸಿದೆ.

Read More

ಚಿಂತಾಮಣಿ ತಾಲ್ಲೂಕು ಆಡಳಿತ, ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ,ಶಿಕ್ಷಣ ಇಲಾಖೆಗಳ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ

ಚಿಂತಾಮಣಿ ತಾಲ್ಲೂಕು ಆಡಳಿತ, ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ,ಶಿಕ್ಷಣ ಇಲಾಖೆಗಳ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಚ್ಚುತ್ತಿರುವ ಜನಸಂಖ್ಯೆ ಕಾರಣ ಮೂಲಭೂತ ಸೌಕರ್ಯಗಳು- ಸವಲತ್ತುಗಳ ಕಲ್ಪಿಸುವುದು ಸವಾಲಾಗಿದ್ದು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸಲಹೆ ನೀಡಿದೆ.

Read More

ಚಿಂತಾಮಣಿ ನಗರದ ಮಾಳಪಲ್ಲಿ ಸ್ವಗೃಹದಲ್ಲಿ ಜನತಾ ದರ್ಶನ

ಚಿಂತಾಮಣಿ ನಗರದ ಮಾಳಪಲ್ಲಿ ಸ್ವಗೃಹದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜನಸಾಮಾನ್ಯರ ಸಮಸ್ಯೆಗಳ ಆಲಿಸಿ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.

Read More

ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ

    ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವ ಸಂದೇಶದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ತನ್ನ 14ನೇ ಬಜೆಟ್ ನ್ನು ಜನಪರವಾದ ಎಲ್ಲಾ ಇಲಾಖೆಗಳ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಡಿಸುವ ಜೊತೆಗೆ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣ ವಿನಿಯೋಗಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಭಿತುಪಡೆಸಿದೆ.

Read More

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 2 ನೇ ಘಟಿಕೋತ್ಸವ

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 2 ನೇ ಘಟಿಕೋತ್ಸವಕ್ಕೇ ಮುಖ್ಯ ಅತಿಥಿಯಾಗಿ ಮಾನ್ಯ ರಾಷ್ಟ್ರಪತಿಗಳು ದ್ರೌಪದಿ ಮುರ್ಮುರವರು ಹಾಗೂ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ರೊಂದಿಗೆ ಭಾಗವಹಿಸಿದೆ. ನಾನು ವಿಧ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು ಹರ್ಷ ತಂದಿದೆ.

Read More

ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ

ಚಿಂತಾಮಣಿ ಕ್ಷೇತ್ರದ ಅತಿ ಹೆಚ್ಚು ನೀರಿನ ಸಂಗ್ರಹ ಸಾಮರ್ಥ್ಯದ ಕೆರೆಗಳು ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ ಅಸಮರ್ಪಕ ನಿರ್ವಹಣೆಯಿಂದ ಶೋಚನೀಯವಾಗಿದ್ದು, ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ತೆರಳಿ ಮಾಹಿತಿ ಪಡೆದು ಮಳೆಗಾಲದ ಮುಂಚಿತವಾಗಿ ದುರಸ್ತಿ ಕಾರ್ಯ ಕೈಗೊಂಡು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

Read More

ಚಿಂತಾಮಣಿ ನಗರದ ಝಾನ್ಸಿ ಕ್ರೀಡಾಂಗಣ

ಚಿಂತಾಮಣಿ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ ಪಾಳು ಬಿದ್ದಿರುವ ವ್ಯಾಯಾಮ ಉಪರಣಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಸದುಪಯೋಗ ಆಗುವಂತೆ ತಕ್ಕ ರೀತಿಯಲ್ಲಿ ಉತ್ತಮ ವ್ಯಾಯಾಮಶಾಲೆಯನ್ನು ಸ್ಥಾಪಿಸಲು ಸೂಚಿಸಲಾಯಿತು.

Read More