Wishes
ಶ್ರೀಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರಿಗೆ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಶುಭಾಶಯ ಕೋರುತ್ತೇನೆ
ಶ್ರೀಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರಿಗೆ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಶುಭಾಶಯ ಕೋರುತ್ತೇನೆ. ಸಮಾಜದ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಶ್ರೀಗಳ ಕಾರ್ಯ ಎಲ್ಲರಿಗೂ ಮಾದರಿ ಪೂಜ್ಯರ ಆಶೀರ್ವಾದ, ಮಾರ್ಗದರ್ಶನ ಸದಾ ನಮ್ಮೆಲ್ಲರ ಮೇಲಿರಲಿ.
ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ
ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುವ ಸಂದೇಶದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ತನ್ನ 14ನೇ ಬಜೆಟ್ ನ್ನು ಜನಪರವಾದ ಎಲ್ಲಾ ಇಲಾಖೆಗಳ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಡಿಸುವ ಜೊತೆಗೆ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣ ವಿನಿಯೋಗಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಭಿತುಪಡೆಸಿದೆ.
ಸರ್ವರಿಗೂ ಬಕ್ರೀದ್ ಹಬ್ಬದ ಶುಭ ಕೋರುತ್ತೇನೆ
ತ್ಯಾಗ ಬಲಿದಾನಗಳ ಪ್ರತೀಕವಾದ ಪವಿತ್ರವಾದ ಹಬ್ಬ ಬಕ್ರೀದ್ ಶಾಂತಿ, ಸೌಹಾರ್ದತೆಯನ್ನು ಜಗತ್ತಿಗೆ ಸಾರಲು ಪ್ರೇರಣೆಯಾಗಲಿ. ಮುಸಲ್ಮಾನ್ ಬಾಂಧವರ ಅತೀ ದೊಡ್ಡ ಎರಡನೇ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರ ಕಷ್ಟಗಳು ದೂರವಾಗಿ ಸುಖ, ಶಾಂತಿ,ನೆಮ್ಮದಿ ಮನೆ ಮಾಡಲು ಪ್ರಾರ್ಥಿಸುತ್ತಾ, ಸರ್ವರಿಗೂ ಬಕ್ರೀದ್ ಹಬ್ಬದ ಶುಭ ಕೋರುತ್ತೇನೆ – Dr MC Sudhakar
ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬ
ಕೇಂದ್ರ ಸರ್ಕಾರದ ದುರುದ್ದೇಶದಿಂದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬವಾದ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರ ನೇರವಾಗಿ ಜನರಿಗೆ 5 ಕೆಜಿ ಅಕ್ಕಿ ಬದಲು 1ಕೆಜಿ ಗೆ 34 ರೂಗಳಂತೆ 170 ರೂ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.