Taluk
ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ
ಚಿಂತಾಮಣಿ ಕ್ಷೇತ್ರದ ಅತಿ ಹೆಚ್ಚು ನೀರಿನ ಸಂಗ್ರಹ ಸಾಮರ್ಥ್ಯದ ಕೆರೆಗಳು ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ ಅಸಮರ್ಪಕ ನಿರ್ವಹಣೆಯಿಂದ ಶೋಚನೀಯವಾಗಿದ್ದು, ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ತೆರಳಿ ಮಾಹಿತಿ ಪಡೆದು ಮಳೆಗಾಲದ ಮುಂಚಿತವಾಗಿ ದುರಸ್ತಿ ಕಾರ್ಯ ಕೈಗೊಂಡು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಚಿಂತಾಮಣಿ ನಗರದ ಝಾನ್ಸಿ ಕ್ರೀಡಾಂಗಣ
ಚಿಂತಾಮಣಿ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ ಪಾಳು ಬಿದ್ದಿರುವ ವ್ಯಾಯಾಮ ಉಪರಣಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಸದುಪಯೋಗ ಆಗುವಂತೆ ತಕ್ಕ ರೀತಿಯಲ್ಲಿ ಉತ್ತಮ ವ್ಯಾಯಾಮಶಾಲೆಯನ್ನು ಸ್ಥಾಪಿಸಲು ಸೂಚಿಸಲಾಯಿತು.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಗೃಹಕ್ಕೆ ಬೇಟಿ
ಕೃಷಿ ಹೊಂಡದಲ್ಲಿ ಬಿದ್ದ ಮಗನನ್ನು ಕಾಪಾಡಲು ಹೋದ ತಂದೆ ಹಾಗೂ ತಾತ ಇಬ್ಬರೂ ಸಾವನ್ನಪ್ಪಿದ ದುರ್ವಿಧಿ ಘಟನೆ ಚಿಂತಾಮಣಿಯ ಅಂಕಾಲಮಡುಗು ಗ್ರಾಮದಲ್ಲಿ ನಡೆದಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಗೃಹಕ್ಕೆ ಬೇಟಿ ನೀಡಿದ್ದು.
*ಉಸಿರಿಗೆ ಹಸಿರು – ಹಸಿರಿಗೆ ಸಸಿಗಳು*
ವನಮಹೋತ್ಸವ ಆಚರಣೆಯ ಅಂಗವಾಗಿ ಚಿಂತಾಮಣಿಯಲ್ಲಿ ಇಂದು ಹಮ್ಮಿಕೊಂಡಿದ್ದ “ಹಸಿರು ಚಿಂತಾಮಣಿ” ಯೋಜನೆಗೆ ಚಾಲನೆ ನೀಡಲಾಯಿತು. ಕಾಡುಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಸಿಗಳನ್ನು ನೆಟ್ಟು, ಹಸಿರು ಕಾಪಾಡಲು ಹಾಗೂ ತ್ಯಾಜ್ಯ ಮುಕ್ತ ಮಾಡುವಲ್ಲಿ ಎಲ್ಲರೂ ಭಾಗಿಯಾಗಿ ಅರಿವು ಮೂಡಿಸುವ ನಿಟ್ಟನಲ್ಲಿ ಪ್ರತಿಜ್ಞೆ ಮಾಡಲಾಯಿತು.
ಚಿಕ್ಕಬಳ್ಳಾಪುರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ
ಚಿಕ್ಕಬಳ್ಳಾಪುರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಅಂಗವಾಗಿ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಗಣ್ಯರ ಜೊತೆ ಪುತ್ಥಳಿಗೆ ಪುಷ್ಪಮಾಲೆ ಸಮರ್ಪಿಸಿ,ಜಿಲ್ಲೆಯ ಪ್ರಗತಿಪರ ರೈತರಿಗೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬ
ಕೇಂದ್ರ ಸರ್ಕಾರದ ದುರುದ್ದೇಶದಿಂದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬವಾದ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರ ನೇರವಾಗಿ ಜನರಿಗೆ 5 ಕೆಜಿ ಅಕ್ಕಿ ಬದಲು 1ಕೆಜಿ ಗೆ 34 ರೂಗಳಂತೆ 170 ರೂ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯೇ ನಮ್ಮ ಮುಖ್ಯ ಧ್ಯೇಯ!
ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಹಿತದೃಷ್ಟಿಯಿಂದ NEP ಕುರಿತಂತೆ ಶಿಕ್ಷಣ ತಜ್ಞರೊಂದಿಗೆ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯೇ ನಮ್ಮ ಮುಖ್ಯ ಧ್ಯೇಯ!
ರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಾನೂ ಸಹ ಯೋಗ ಮಾಡಿ ದೈನಂದಿನ ಜೀವನದಲ್ಲ ಯೋಗದಿಂದ ಆಗುವ ಉಪಯೋಗಗಳು ಹಾಗೂ ಆರೋಗ್ಯಕರ ವಾತಾವರಣ ನಿರ್ಮಾಣದ ಕುರಿತು ಅರಿವು ಮೂಡಿಸಲಾಯಿತು.
ಚಿಂತಾಮಣಿ ನಗರದ ಮಾಳಪಲ್ಲಿಯ ಗೃಹ ಕಚೇರಿಯಲ್ಲಿ ಜನತಾ ದರ್ಶನ.
ಚಿಂತಾಮಣಿ ನಗರದ ಮಾಳಪಲ್ಲಿಯ ಗೃಹ ಕಚೇರಿಯಲ್ಲಿ ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಬಿಪಿಎಲ್ ಕುಟುಂಬದ ಪ್ರತೀ ಸದಸ್ಯನಿಗೂ 10 ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ
ಬಿಪಿಎಲ್ ಕುಟುಂಬದ ಪ್ರತೀ ಸದಸ್ಯನಿಗೂ 10 ಕೆಜಿ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷದ ಧೋರಣೆ ವಿರುದ್ಧ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಅವರು, ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಅವರು, ಶಾಸಕರಾದ ಪ್ರದೀಪ್ ಈಶ್ವರ್ ಅವರು ಸೇರಿದಂತೆ ಹಿರಿಯ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.